Saturday 17 October 2015

ಬಾರೋ ಗಣನಾಥನೆ


   ಬಾರೋ ಗಣನಾಥನೆ 
ಬಾರೋ ಗಣನಾಥನೆ ನಿನ್ನ ಪೂಜಿಪೆ ವಿಖ್ಯಾತನೆ
ಬಾರಯ್ಯ ಬಾಬೇಗ ಬಾ ಸಿದ್ಧಿ ಕಾಂತನೆ
ತೋರಯ್ಯ ನೀ ನಿನ್ನ ಚರಣವನೀಗಾ॥ಪ॥

ಗೌರಿಯ ಸುಕುಮಾರನೆ ಆದಿ ಪೋಜಿತ ಗಣನಾಥನೆ
ಆದರದಿಂದಲಿ ನಿನ್ನಯ ನಾಮವ ಮೋದದಿ
ಸ್ಮರಿಸುತ್ತ ಪ್ರೇಮದಿ ಕರೆವೆವು॥೧॥

ಸಿದ್ಧಿ ವಿನಾಯಕನೆ ಮುದ್ದು ಗೌರಿಯ ಸುಪುತ್ರನೆ
ಶೀಘ್ರದಿ ಭಕ್ತರು ಎತ್ತಿದ ಕಾಯಕೆ
ಬುದ್ಧಿ ಪ್ರದಾಯಕ ಸಿದ್ಧವಾಗಿಹಯೆ ನೀನು॥೨॥

ಶೀ ಮಹಾಗಣನಾಥನೆ ಇಡಗುಂಜಿ ಪುರವಾಸನೆ
ಕರುಣಾಳು ನಿನ್ನೊಳು ಪರಿಪರಿ ಬೇಡ್ವರೆ
ದಯ ತೋರಿ ಭಕ್ತರ ಕಾಪಾಡೊ ಗುಣವಂತ॥೩॥

-ನಳಿನಾಕ್ಷಿ ಹೀನಗಾರ್

Sunday 22 March 2015

ಹೊಸ ವರುಷಕೆ ಹೊಸ ಕೃತಿ



ಹೊಸ ವರುಷಕೆ ಹೊಸ ಕೃತಿಯನು ರಚಿಸಿ
ಹಾಡುವೆ ನಾನು ಮುದದಿಂದ,ಎಲ್ಲರು ಕೇಳಿ
ಹೇಗಿಹುದೆದು ಹೇಳಿರಿ ನನಗೆ ಒಲವಿಂದ
ನೀವ್ ಹೇಳಿದರೆ ನನಗೆ ಆನಂದ.

ಮನುಜರ ಬಾಳಲಿ ಏನಿಹುದೆಂದು
ಆಸೆಯ ಪಡುವಿರಿ ನೀವೆಲ್ಲ
ನೀರ ಮೇಲಿನ ಗುಳ್ಳೆಯಂತೆ
ತಿಳಿದು ಬಾಳಿರಿ ಜನರೆಲ್ಲ.

ಮೈಯಲಿ ಬಿಸಿ ಬಿಸಿ ರಕ್ತ ಹರಿವಾಗ
ಒಬ್ಬರಿಗಿನ್ನೊಬ್ಬರ ಹಂಗೇಕೆ
ರಟ್ಟೆಯ ಬಲವು ಕುಸಿದಿರುವಾಗ
ಒಬ್ಬರಿಗೊಬ್ಬರು ಬೇಕೇಬೇಕು.

ಭೂಮಿ ಮೇಲಿರುವಷ್ಟು ದಿವಸ
ಪ್ರೀತಿ ಪ್ರೇಮದೊಳಿರಿ ಎಲ್ಲ
ಬದುಕಿರುವಷ್ಟು ದಿನ ಒಳ್ಳೆಯ ಹೆಸರನು 
ಉಳಿಸಿ ಬಾಳಿರಿ ಜನರೆಲ್ಲ.

ಎಲ್ಲರ ಬಡಿದು ಕೊಳ್ಳೆಯ ಹೊಡೆದು
ಏನನು ದೋಚಿಕೊಂಡೋಹದಿರಿ
ಬೆವರನು ಸುರಿಸಿ ಎಲ್ಲರು ದುಡಿದು
ತಿಂದು ಬದುಕಿರಿ ಜನರೆಲ್ಲ.

                               -ನಳಿನಾಕ್ಷಿ ಹೀನಗಾರ್

Friday 20 March 2015

ಹೊಸ ವರುಷ



ಬಂದಿದೆ ಬಂದಿದೆ ಹೊಸ ವರುಷ
ತರುತಿದೆ ನಮಗೆಲ್ಲರಿಗ ಹರುಷ.

ಸುಖ ಶಾಂತಿಯ ನೀಡಲಿ ಈವರುಷ
ಸಹಬಾಳ್ವೆಯ ನಡೆಸಿರಿ ಪ್ರತಿ ವರುಷ.

ಪ್ರತಿ ವರುಷವು ಬರುತಿದೆ ಹೊಸ ವರುಷ.
ಕಷ್ಟ ಸುಖದಿ ಕಳೆಯುವವುದೀ ವರುಷ.

ಯುವ ಜನರೇಳ್ಗೆಗೆ ಶುಭ ನೀಡಲಿ ಪ್ರತಿ ನಿಮಿಷ
ಸಂತೂಷದಿ ಬಾಳಿರಿ ಪ್ರತಿವರುಷ.

-ನಳಿನಾಕ್ಷಿ ಹೀನಗಾರ್

Thursday 5 March 2015

ಬಾರೆ ಶಾರದೆ ವೀಣೆ ಹಿಡಿದು



ಬಾರೆ ಶಾರದೆ ವೀಣೆ ಹಿಡಿದು ನೀ
ವೀಣೆ ನಾದವ ನುಡಿಸುತ
ಪ್ರೇಮದಿಂದಲಿ ನಿನ್ನ ಕರೆವೆನು
ವೀಣೆ ನಾದವ ಕೇಳಲು।।

ಜರಿಯ ಪೀತಾಂಬರವ ಉಟ್ಟು
ಕಡಗ ಕಂಕಣ ಬಳೆಯನಿಟ್ಟು
ಹೆಜ್ಜೆ ಹಜ್ಜೆಗು ಗೆಜ್ಜೆ ನಾದದ
ಗತ್ತನಿಡುತ  ನೀ ಬಾರೆಲೆ

ತುಂಗ ತೀರದ ಶೃಂಗೇರಿಯಲಿ
ನೆಲೆಸಿರುವೆಯೆ ಮಾತೆಯೆ
ಬ್ರಂಗಕುಂತಳೆ ಕೋಮಲಾಂಗಿಯೆ
ನಿನ್ನ ಕರೆವೆ ನಾನೀಗಲೆ

ವರುಷ ವರುಷವು ನವರಾತ್ರಿಯಲಿ
ಹರುಷ ದಿಂದಲಿ ಭಕ್ತರು
ನಿನ್ನ ಕರೆದು ಪೂಜೆಮಾಡಿ
ಆಶಿರ್ವಾದವ ಬೇಡ್ವರು

ನಾನು ನಿನ್ನ ಚರಣಕೆರಗಿ
ಬೇರೆ ಏನನು ಬೇಡೆನು
ವೀಣೆ ನಾದದ ಜೊತೆಗೆ ಹಾಡುವ
ಭಾಗ್ಯವನು ನೀಡೆನಗೆ ನೀ

-ನಳಿನಾಕ್ಷಿ ಹೀನಗಾರ್

Thursday 26 February 2015

ಶೃಂಗೇರಿ ಶ್ರೀ ಶಾರದಾಂಬಾ






ಧಾಟಿ-ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ...



ಶೃಂಗೇರಿ ಶ್ರೀ ಶಾರದಾಂಬಾ
ನಾನಿನ್ನ ಕರೆವೆ ಮೂಕಾಂಬಾ
ನೀ ನಮ್ಮ ಮನೆಗಿಂದು ಬಂದು
ನಮ್ಮ ಬಾಳನ್ನು ಬೆಳಗೀಸೆ ಅಂಬಾ॥ಪ

ನೀನಿನ್ನು ನಮ್ಮ ಗ್ರಹದಲ್ಲಿ ನೆಲೆಸಿ
ಭಕ್ತರ ಕಷ್ಟವ ಹರಿಸೆ, ನಿನ್ನಂತ ನಡೇಯ
ನಿನ್ನಂತ ನುಡಿಯ ನೀ ನೀಡು ನಮಗಿನ್ನು ತಾಯೆ
ಶಾರದೆ ವಾರಿದೆ ದಯೆತೋರೆ ಕರುಣನಿಧೆ॥೧

ಮಂಗಳದಾತೆ ಹೇ ಜಗನ್ಮಾತೆ ಪೋಜಿಪೆ ನಿನ್ನ
ವಿಖ್ಯಾತೆ,ನಿನ್ನೋಳು ನಾವು ಬೇಡುವೆ ವೀಗಾ
ಮಾಂಗಲ್ಯ ಭಾಗ್ಯವ ತಾಯೆ, ನೀ ನೀಡುತ
ಶುಭ ಕೋರುತ ಸೌಭಾಗ್ಯ ನೀ ನೀಡೆ ತಾಯೆ॥೨

ಹಗಲಲ್ಲೂ ನಿನ್ನ ಇರಳಲ್ಲೂ ನಿನ್ನ ನಾನಿನ್ನ
ನಾಮವ ಸ್ಮರಿಪೆ,ಚರಣಕ್ಕೆ ಮಣಿದು
ಕರವನ್ನು ಮುಗಿದು ನಿನ್ನೋಳು ಬೇಡುವೆನೀಗ
ಕಾಣದ ಕೇಳದ ಸೊಗಸಾದ ವರವನ್ನು ನೀಡೇ॥೩

                                         -ನಳಿನಾಕ್ಷಿ ಹೀನಗಾರ್
ಈ ಹಾಡನ್ನು YouTube ನಲ್ಲಿ ಕೇಳೀ ನಿಮ್ಮ ಅಭಿಪ್ರಾಯ ತಿಳಿಸಿ

ಈ ಹಾಡೀನ ವೀಡಿಯೊ