ಚೈತ್ರ ಮಾಸ ಬಂದಿತೀಗ
ವನದ ಸೊಬಗ ನೋಡಿರಿ
ಬಿಸಿಲ ಬೇಗೆಯಿಂದ ಬಳಲಿ
ಮನವು ಕಳವಳಗೊಳುತಿಹೆ||ಪ||
ಹಳೆಯುಗವು ಕಳೆದು ಮತ್ತೆ
ಹೊಸ ಯುಗಕೆ ಕಾಲಿಡುತಿಹೆ
ಸಿಹಿ ಕಹಿಯನುಂಡು ಎಲ್ಲಾ
ನೋವು ನಲಿವಿನಲಿ ಕಳೆಯಬೇಕಾಗಿಹೆ||೧||
ಚಿಗುರು ಒಡೆದು ಮೊಗ್ಗು ಅರಳಿ
ಪರಿಮಳವ ಹರಡಲಿ
ತಂಪುಗಾಳಿ ಕಂಪ ಸೂಸಿ
ಮನಕೆ ಮುದವ ಗೊಳಿಸಲಿ ||2||
ಗಿರಿಯ ನವಿಲು ಗರಿಯ ಬಿಚ್ಚಿ
ಕೇಕೆ ಹಾಕಿ ನಲಿಯಲಿ
ಅದನು ಕಂಡು ನವಿಲ ಹಿಂಡು
ಹಿಗ್ಗಿ ಮಳೆಯ ಕರೆಯಲಿ ||೩||
-ನಳಿನಾಕ್ಷಿ ಗಣೇಶ್ ಹೆಗಡೆ
ವನದ ಸೊಬಗ ನೋಡಿರಿ
ಬಿಸಿಲ ಬೇಗೆಯಿಂದ ಬಳಲಿ
ಮನವು ಕಳವಳಗೊಳುತಿಹೆ||ಪ||
ಹಳೆಯುಗವು ಕಳೆದು ಮತ್ತೆ
ಹೊಸ ಯುಗಕೆ ಕಾಲಿಡುತಿಹೆ
ಸಿಹಿ ಕಹಿಯನುಂಡು ಎಲ್ಲಾ
ನೋವು ನಲಿವಿನಲಿ ಕಳೆಯಬೇಕಾಗಿಹೆ||೧||
ಚಿಗುರು ಒಡೆದು ಮೊಗ್ಗು ಅರಳಿ
ಪರಿಮಳವ ಹರಡಲಿ
ತಂಪುಗಾಳಿ ಕಂಪ ಸೂಸಿ
ಮನಕೆ ಮುದವ ಗೊಳಿಸಲಿ ||2||
ಗಿರಿಯ ನವಿಲು ಗರಿಯ ಬಿಚ್ಚಿ
ಕೇಕೆ ಹಾಕಿ ನಲಿಯಲಿ
ಅದನು ಕಂಡು ನವಿಲ ಹಿಂಡು
ಹಿಗ್ಗಿ ಮಳೆಯ ಕರೆಯಲಿ ||೩||
-ನಳಿನಾಕ್ಷಿ ಗಣೇಶ್ ಹೆಗಡೆ