Wednesday, 25 February 2015

ಪೂಜಿಸುವೆ ಗೌರಿಯ ಸುಕುಮಾರನ



ಪೂಜಿಸುವೆ ಗೌರಿಯ ಸುಕುಮಾರನ
ಮೂರ್ಜಗದೊಡೆಯ ಶ್ರೀ ವಿಘ್ನೇಶ್ವರನ॥ಪ॥

ಆದಿ ಪೂಜಿತನ ಮೋದಕ ಪ್ರಿಯನ ಆದರದಿಂದಲಿ
ಆ ಮಹಾ ಮಹಿಮನ ವೇದ ಮಂತ್ರವನು ಪಠಿಸುತಲೀಗ॥೧॥

ಸಿದ್ಧಿವಿನಾಯಕ ಶಿವನ ಪುತ್ರನೆ ನಿನಗೆ ಶುದ್ಧೋದಕ
ದಭಿಷೇಕವ ಮಾಡಿ ಶುದ್ಧ ಮನದಿ ನಿನ್ನ ಧ್ಯಾನಿಸುತ್ತೀಗ॥೨॥

ಲಂಭೋದರನ ಶಂಭುಕುವರನ ಚಂದನ ಲೇಪಿತ
ಸುಂಡಿಲ ಧರನ ಗಂಧ ಚಂದನ ದೂರ್ವೆ ಪತ್ರೆಗಳಿಂದ॥೩॥

ಶಕ್ತಿಕುಮಾರನೆ ಭಕ್ತ ಪೋಷಕನೆ ಭಕ್ತರ ಕಷ್ಟವ ಪರಿಹರಿ
ಸುವನೆ ಭಕ್ತಿಯಿಂದಲಿ ನಿನ್ನ ನಾಮವ ಸ್ಮರಿಸುತ ॥೪॥

ಯಳ್ಳುಂಡೆ ಮೋದಕ ಪಓಚಕಜ್ಜಾಯವ ಅಪ್ಪಾಲು ಅತಿರಾಸ
ಲಡ್ಡಿಗೆ ಸಹಿತಾ ಸಂತೋಷದಿಂದಲಿ ಮೆಲುವ ಹೊಟ್ಟೆ ಗಣೇಶನ॥೫॥
                         -ನಳಿನಾಕ್ಷಿ ಹೀನಗಾರ್