ಮುಖಪುಟನಳಿನಾಕ್ಷಿ ಗಣೆಶ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೀನಗಾರಿನವರು. ಇವರು ಅನೇಕ ದೇವರ ಭಜನೆಗಳು ,ವಿಡಂಬನಾತ್ಮಕ ಹಾಡುಗಳು,ಸಾಂಪ್ರದಾಯಿಕ ಹಾಡುಗಳನ್ನು ತಮ್ಮದೇ ಆದ ಶೈಲಿಯಲ್ಲಿ ರಚಿಸಿ,ತಮ್ಮದೇ ಆದ ಧಾಟಿಯಲ್ಲಿ ಹಾಡಿದ್ದಾರೆ.

ಅಲ್ಲದೇ ತಮ್ಮ ಜೀವನದ ಕಷ್ಟ,ಸುಖ,ದುಃಖ ,ಸಂತೋಷಗಳೆಲ್ಲವನ್ನೂ ಹಾಡಾಗಿ ದಾಖಲಿಸಿ ಅನುಭವಿಸಿದ್ದಾರೆ. ಕೇವಲ ಅಲ್ಪವಿದ್ಯಾವಂತರಾದ  ಇವರ ಪದ ಜೋಡಣೆ,ಸಂಗೀತದ ಯಾವುದೇ ಕಲಿಕೆ ಇಲ್ಲದೇ ತಮ್ಮದೇ ರೀತಿಯಲ್ಲಿ ಹಾಡಿರುವುದು ನಿಜಕ್ಕೂ ಶ್ಲಾಘನೀಯ.

ಆವರ ಆ ಹಾಡುಗಳನ್ನು ಈ ಬ್ಲಾಗಿನ ಮೂಲಕ ಪ್ರಕಟಿಸುವ ಒಂದು ಪ್ರಯತ್ನ ಮಾಡಿದ್ದೇನೆ.ಇಲ್ಲಿ ಬರೆದಿರುವ ಯಾವುದೇ ಹಾಡನ್ನು ಸಾಹಿತ್ಯ ಬಲ್ಲವರಿಂದ ಪರಿಶೀಲಿಸಲಾಗಿಲ್ಲ. ಯಾವುದೇ ತಪ್ಪುಗಳು ಕಂಡುಬಂದಲ್ಲಿ ದಯವಿಟ್ಟು ನಮಗೆ ಬರೆದು ತಿಳಿಸಿ.
                                              "ನಾನಿಲ್ಲ ಚಂದ
                                             ಆದರೆ ನಾರಚಿಸುವ
                                             ಕೃತಿಯೆಲ್ಲ ಬಲುಚಂದ
                                             ಅದನ್ನು ಎಲ್ಲರೂ ನೋಡಿದರೆ
                                             ನನಗೆ ತುಂಬಾ ಆನಂದ."  -ನಳಿನಾಕ್ಷಿ ಹೀನಗಾರ್

                                            "ನಾನೊಬ್ಬ ಪೆದ್ದಿ
                                             ನನಗಿಲ್ಲ ಬುದ್ಧಿ
                                             ಆದರೆ ನಾನೊಬ್ಬ ಕವಿಯಾಗಿ
                                             ಪಡೆಯುವೆ ಜಗತ್ ಪ್ರಸಿದ್ಧಿ."  -ನಳಿನಾಕ್ಷಿ ಹೀನಗಾರ್

ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ...!!!

                                                  -RG Hegde
                                                    hegdesdp@gmail.com

No comments:

Post a Comment