Thursday 26 February 2015

ಶೃಂಗೇರಿ ಶ್ರೀ ಶಾರದಾಂಬಾ






ಧಾಟಿ-ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ...



ಶೃಂಗೇರಿ ಶ್ರೀ ಶಾರದಾಂಬಾ
ನಾನಿನ್ನ ಕರೆವೆ ಮೂಕಾಂಬಾ
ನೀ ನಮ್ಮ ಮನೆಗಿಂದು ಬಂದು
ನಮ್ಮ ಬಾಳನ್ನು ಬೆಳಗೀಸೆ ಅಂಬಾ॥ಪ

ನೀನಿನ್ನು ನಮ್ಮ ಗ್ರಹದಲ್ಲಿ ನೆಲೆಸಿ
ಭಕ್ತರ ಕಷ್ಟವ ಹರಿಸೆ, ನಿನ್ನಂತ ನಡೇಯ
ನಿನ್ನಂತ ನುಡಿಯ ನೀ ನೀಡು ನಮಗಿನ್ನು ತಾಯೆ
ಶಾರದೆ ವಾರಿದೆ ದಯೆತೋರೆ ಕರುಣನಿಧೆ॥೧

ಮಂಗಳದಾತೆ ಹೇ ಜಗನ್ಮಾತೆ ಪೋಜಿಪೆ ನಿನ್ನ
ವಿಖ್ಯಾತೆ,ನಿನ್ನೋಳು ನಾವು ಬೇಡುವೆ ವೀಗಾ
ಮಾಂಗಲ್ಯ ಭಾಗ್ಯವ ತಾಯೆ, ನೀ ನೀಡುತ
ಶುಭ ಕೋರುತ ಸೌಭಾಗ್ಯ ನೀ ನೀಡೆ ತಾಯೆ॥೨

ಹಗಲಲ್ಲೂ ನಿನ್ನ ಇರಳಲ್ಲೂ ನಿನ್ನ ನಾನಿನ್ನ
ನಾಮವ ಸ್ಮರಿಪೆ,ಚರಣಕ್ಕೆ ಮಣಿದು
ಕರವನ್ನು ಮುಗಿದು ನಿನ್ನೋಳು ಬೇಡುವೆನೀಗ
ಕಾಣದ ಕೇಳದ ಸೊಗಸಾದ ವರವನ್ನು ನೀಡೇ॥೩

                                         -ನಳಿನಾಕ್ಷಿ ಹೀನಗಾರ್
ಈ ಹಾಡನ್ನು YouTube ನಲ್ಲಿ ಕೇಳೀ ನಿಮ್ಮ ಅಭಿಪ್ರಾಯ ತಿಳಿಸಿ

ಈ ಹಾಡೀನ ವೀಡಿಯೊ

Wednesday 25 February 2015

ಪೂಜಿಸುವೆ ಗೌರಿಯ ಸುಕುಮಾರನ



ಪೂಜಿಸುವೆ ಗೌರಿಯ ಸುಕುಮಾರನ
ಮೂರ್ಜಗದೊಡೆಯ ಶ್ರೀ ವಿಘ್ನೇಶ್ವರನ

ಆದಿ ಪೂಜಿತನ ಮೋದಕ ಪ್ರಿಯನ ಆದರದಿಂದಲಿ
ಮಹಾ ಮಹಿಮನ ವೇದ ಮಂತ್ರವನು ಪಠಿಸುತಲೀಗ

ಸಿದ್ಧಿವಿನಾಯಕ ಶಿವನ ಪುತ್ರನೆ ನಿನಗೆ ಶುದ್ಧೋದಕ
ದಭಿಷೇಕವ ಮಾಡಿ ಶುದ್ಧ ಮನದಿ ನಿನ್ನ ಧ್ಯಾನಿಸುತ್ತೀಗ

ಲಂಭೋದರನ ಶಂಭುಕುವರನ ಚಂದನ ಲೇಪಿತ
ಸುಂಡಿಲ ಧರನ ಗಂ ಚಂದನ ದೂರ್ವೆ ಪತ್ರೆಗಳಿಂದ

ಶಕ್ತಿಕುಮಾರನೆ ಭಕ್ತ ಪೋಷಕನೆ ಭಕ್ತರ ಕಷ್ಟವ ಪರಿಹರಿ
ಸುವನೆ ಭಕ್ತಿಯಿಂದಲಿ ನಿನ್ನ ನಾಮವ ಸ್ಮರಿಸುತ

ಯಳ್ಳುಂಡೆ ಮೋದಕ ಪಓಚಕಜ್ಜಾಯವ ಅಪ್ಪಾಲು ಅತಿರಾಸ
ಲಡ್ಡಿಗೆ ಸಹಿತಾ ಸಂತೋಷದಿಂದಲಿ ಮೆಲುವ ಹೊಟ್ಟೆ ಗಣೇಶನ
                         -ನಳಿನಾಕ್ಷಿ ಹೀನಗಾರ್

Tuesday 24 February 2015

ಮಧುರ ಕಂಠವ ಕೊಡು



ಮಧುರ ಕಂಠವ ಕೊಡು ನನ್ನತಾಯೆ
ಕ್ಷಣ ಕ್ಷಣಕು ಹಾಡನ್ನು ಹಾಡುತಿರುವೆನು ನಾನು.

ನಾನೊಬ್ಬ ಕವಿಯಾಗಿ ಕೃತಿಯನ್ನು ರಚಿಸುತ್ತ
ಸುಸ್ವರದಿ ಹಾಡುವೆನು ಹರಸು ಬಾ ತಾಯೆ.

ವೀಣೆಯನು ನುಡಿಸು ನಿ  ಹಾಡನ್ನು ಹಾಡುವೆನು
ಜನರೆಲ್ಲ ಕೇಳಿನ್ನು ಸಂತೋಷಗೊಳಲಿ.

ಸುಂದರ ಹಾಡನ್ನು ರಚಿಸಿ ನಾ ಹಾಡುವೆನು
ಬಂದು ನೀ ಕುಳಿತಿಲ್ಲಿ ಕೇಳೆನ್ನ ತಾಯೆ.

                           -ನಳಿನಾಕ್ಷಿ ಹೀನಗಾರ್