Saturday, 21 February 2015

ಮುಂಜಾವಿನ ಸೊಬಗು


ಚಿಗುರಿದ ಸೊಂಪಿನ ಮರಗಳ ಮೇಲೆ
ಕುಹೂ ಕುಹೂ ಕೋಗಿಲೆ ಕೂಗುತಿಹೆ
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಲರವ
ಸವಿಗಾನದೊಳು ಮೊಳಗುತಿಹೆ.

ಬಗೆ ಬಗೆ ಬಣ್ಣದ ಹೂಗಳು ಅರಳಿ
ಘಮ ಘಮ ಪರಿಮಳ ಬೀರುತಿಹೆ
ಮುಂಜಾವಿನ ರವಿ ಕಿರಣಗಳೆದುರು
ಪ್ರಕೃತಿಯ ಸೊಬಗು ಚಿಮ್ಮುತಿಹೆ.

ಗಿರಿ ಶಿಖರದೊಳು ಸುಂದರ ನವಿಲು
ಕೂಗುತ ನಾಟ್ಯವ ನಾಡುತಿಹೆ
ಮುಂಜಾವಿನೊಳು ಮುಂಗೋಳಿಗಳು
ಕೂಗುತ ಎಲ್ಲರ ಎಚ್ಚರಿಸುತಿಹೆ.

ಮೂಡಣ ದಿಕ್ಕಿನ ಗಾಳಿಯು ಬೀಸಿ
ಗಿಡಮರಗಳು ಅಲ್ಲಾಡುತಿವಹೆ
ಪಡುವಣ ಕಡಲಿನ ತೆರೆಗಳು
ಬೋರ್ಗರೆಯುತ ಬಂದು ಅಪ್ಪಳಿಸುತಿಹೆ.

-ನಳಿನಾಕ್ಷಿ ಹೀನಗಾರ್

No comments:

Post a Comment