Monday, 23 February 2015

ಕುಡುಕನ ಬೇಡಿಕೆ


ಕಾಸು ನೀಡಿರಣ್ಣ ಎನಗೆ ಕಾಸು ನೀಡಿರಣ್ಣ,
ಕಾಸನು ನೀಡಿದರೆನಗೆ ಪುಣ್ಯ ಬರುವುದಣ್ಣ
ನಿಮಗೆ ಪುಣ್ಯ ಬರುವುದಣ್ಣ.

ನೀವ್ ಕೊಟ್ಟ ಕಾಸನ್ನು ಬಾರಿಗೆ ನಾ
ಒಯ್ದು ಮಜ ಮಾಡಿ ಬರುವೆನಣ್ಣ
ಕುಡಿದಲ್ಲಿ ಮಜಮಾಡಿ ಬರುವೆನಣ್ಣ.

ರೋಡ್ತುಂಬ ಓಡಾಡಿ ಮಣ್ಣಲ್ಲಿ ಬಿದ್ದೆದ್ದು
ಒಲಿಯುತ ನಾ ಮನೆಗೆ ಬರುವೆನಣ್ಣ
ನಿತ್ಯ ಒಲಿಯುತ ನಾ ಮನೆಗೆ ಬರುವೆನಣ್ಣ.
         
                                      -ನಳಿನಾಕ್ಷಿ ಹೀನಗಾರ್

No comments:

Post a comment