Saturday, 21 February 2015

ಬಾ ನೀ ಮಳೆಯೆ


ಕಿಟಿ ಕಿಟಿ ಕಿಟಿ ಕಿಟಿ ಕಿಟಿ ಕಿಟಿ ಮಳೆಯೆ
ಭರ ಭರ ಭರ ಭರ ಸುರಿಯೆ ನೀ ಮಳೆಯೆ
ಭೂಮಿಗೆ ನೀನು ನೀರನು ಸುರಿಸಿ
ಎಲ್ಲರ ಮನವನು ತಣಿಸು ನೀ ಮಳೆಯೆ.

ಗುಡುಗು ಸಿಡಿಲು ಕೋಲ್ಮಿಂಚನು ತಡೆದು
ಭರ ಭರ ಬೀಸುವ ಬಿರುಗಾಳಿಯ ತಡೆದು
ರಭಸದಿ ನೀರನು ಸುರಿಯೆ ನೀ ಮಳೆಯೆ.

ಪೈರನು ಬೆಳೆಸಿ ಧಾನ್ಯವ ನೀಡಿ
ಎಲ್ಲರಿಗು ನೀ ನೀರನು ಕುಡಿಸಿ
ಎಲ್ಲರ ಬದುಕಿಸಿ ಉಳಿಸು ನೀ ಮಳೆಯೆ.

ಎಲ್ಲೆಡೆಗೂ ನೀ ಹಸಿರನು ಬೆಳೆಸಿ
ಹಸುಗಳಿಗೆಲ್ಲ ಮೇವನು ತಿನಿಸಿ
ಸರ್ವ ಜೀವಿಗಳ ಉಳಿಸು ನೀ ಮಳೆಯೆ.
                            
                                        -ನಳಿನಾಕ್ಷಿ

No comments:

Post a comment