Sunday 22 February 2015

ನನ್ನ ಕವನ

ನಾ ಬರೆಯುವೆ ಕವನ
ಅದರ ಹೆಸರು ಸುಮ.
ಸುಮ ಅರಳಿ ಪರಿಮಳವ ಸೂಸಿದಾಗ
ಜಗವೆಲ್ಲ ಘಮ ಘಮ.

ನಾ ಬರೆಯುವ ಕವನ ಚಂದ
ಘಮ ಘಮ ಪರಿಮಳ ಶ್ರೀಗಂಧ
ಜನರೆಲ್ಲ ಕೇಳಿ ಸಂತೋಷದಿಂದ
ನನಗೆ ತುಂಬ ಆನಂದ.

ನಾ ಏನನ್ನೂ ನೋಡಿ ಕಲಿಯಲಿಲ್ಲ
ನಾ ಏನನ್ನೂ ಕೇಳಿ ತಿಳಿಯಲಿಲ್ಲ
ಆದರೆ ನೀ ಹೇಗೆ ಬರೆಯುವೆ
ಎಂದು ಕೇಳಿದರೆ ನನಗೆ
ಹೇಳಲು ಬರುವುದಿಲ್ಲ.
                          -ನಳಿನಾಕ್ಷಿ

No comments:

Post a Comment