Sunday 22 February 2015

ಜ್ನಾನ ಜ್ಯೋತಿ

ನನ್ನುಸಿರ ಬಾಳಿನಲಿ
ಹೊಂಗನಸ ಕಾಣುತಲಿ
ಜ್ನಾನ ಜ್ಯೋತಿಯ
ಪ್ರಭೆಯು ಬೆಳಗುತಿರಲಿ.

ಜೀವನದ ಉದ್ದಕ್ಕೂ
ಮರಮರನೆ ಮರುಗುತಲಿ
ಕಣ್ಣೀರ ಧಾರೆಯಲಿ
ಕೊನೆ ಉಸಿರನೆಳೆವೆ.

ಹಾಡನ್ನು  ರಚಿಸುತ್ತ
ಸವಿಗಾನ ಹಾಡುತ್ತ
ಈ ನನ್ನ ಬಾಳಿನಲಿ
ಸಂತೋಷ ಗೊಳುತಿರುವೆ.

ನಾ ಕಂಡ ಕನಸೊಂದು
ಮಂಜಿನಲಿ ಮುಸುಕಿತು
ಕಾಣದಿಹ ಕೃತಿ ಇಂದು
ರವಿಕಿರಣದೊಳುದಯಿಸಿತು.
                          -ನಳಿನಾಕ್ಷಿ

No comments:

Post a Comment