Sunday, 22 February 2015

ಕಾಯವಿದು ಸ್ಥಿರವಲ್ಲ
ಕಾಯವಿದು ಸ್ಥಿರವಲ್ಲ ಕೇಳಿರಯ್ಯ
ಕಾಯಕವೆ ಕೈಲಾಸ ನೋಡಿರಯ್ಯ॥ಪ॥

ದೇಹವೆ ಗುಡಿಯು ಜೀವವೆ ದೇವನು
ಆ ಪರಮಾತ್ಮನ ಭಜಿಸಿ ಬದುಕೆಲೋ ಮನುಜ॥೧॥

ಜ್ನಾನಿಯೇ ಗುರುವು ಅಜ್ನಾನಿಯೇ ಅವಿವೇಕಿ
ಸುಜ್ನಾನವಂತನಾಗಿ ಬದುಕೆಲೋ ಮನುಜಾ॥೨॥

ಪರರನು ನಿಂದಿಸದೆ ಪರಪರತತ್ವವನು ಅರಿತು
ತನ್ನಂತೆ ಪರರೆಂದು ತಿಳಿದು ಬದುಕಲೋ ಮನುಜಾ॥೩॥

                                                 --ನಳಿನಾಕ್ಷಿ


ಈ ಹಾಡನ್ನು youtube ನಲ್ಲಿ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

 ಈ ಹಾಡಿನ ವೀಡಿಯೊ

No comments:

Post a comment