Saturday, 21 February 2015

ರಂಗ ಬಾರೋ

ರಂಗ ಬಾರೋ ಮುದ್ದು ಕೃಷ್ಣ ಬಾರೋ
ರಂಗ ಬಾರೋ ಗೋಪಿ ಕಂದ ಬಾರೋ.

ಸುಂದರಾಂಗನೆ ಸುಜನರ ಪಾಲ
ನಂದಗೋಪಿಯ ಕಂದ ಶ್ರೀಲೋಲ
ಚಂದದಿ ನಾಟ್ಯವನಾಡುತ ನೀನು
ಮಂದಹಾಸವ ಬೀರುತ ಬಾರೋ.

ಕಾಲಗೆಜ್ಜೆಯ ಕುಣಿಸುತ ನೀನು
ಪುಟ್ಟ ಪುಟ್ಟ ಹೆಜ್ಜೆಯ ನಿಡುತ
ಕರದೊಳು ಕೊಳಲ ಪಿಡಿದು ನೀನು
ಕೊಳಲನಾದವ ನುಡಿಸುತ ಬಾರೋ.

ಝಣಿ ಝಣಿ ಝಣಿ ಝಣಿ ಝಣಿ ಝಣಿ ರೆನುತ
ಗೆಜ್ಜೆಯ ನಾದವ ಬೀರುತ ನೀನು
ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಡುತ
ನಾಟ್ಯವ ನಾಡುತ ಬಾ ಬೇಗ.
                                      -ನಳಿನಾಕ್ಷಿ

No comments:

Post a comment