Sunday, 22 February 2015

ನನ್ನ ಕೃತಿ


ಕೆಸರಿನ ಕೊಳದೊಳು ಅರಳುವ ಕಮಲವು
ಎಲ್ಲರಿಗೂ ಬೇಕೆನಿಸುವುದು.
ಮುಳ್ಳಿನ ಗಿಡದೊಳು ಅರಳುವ ಹೂಗಳ ಎಲ್ಲರು
ಮುಡಿಯೊಳು ಮುಡಿಯುವರು.

ಮಂಜಿನ ಮುಸುಕೊಳು ಅರಳುವ ಸುಮಗಳು
ಬಿಸಿಲಿನ ಬೇಗೆಗೆ ಬಾಡುವುದು.
ಸೂರ್ಯನ ಕಿರಣಕೂ ಬಾಡದೀ ಕೃತಿಯು
ನನ್ನೀ ಮನದೊಳು ತುಂಬಿಹುದು.
                          -ನಳಿನಾಕ್ಷಿ

No comments:

Post a Comment