Friday, 20 February 2015

ಮಧುರ ಹಾಡು

ಮಧುರ ಕಂಠವ ಕೊಡು ಶ್ರೀ ಮಹಾತಾಯೆ
ಕೃತಿಯನ್ನು ರಚಿಸುತ್ತ ಪ್ರತಿದಿನವು ಹಾಡುವೆನು
ಕ್ಷಣ ಕ್ಷಣ ಕು ಸ್ತುತಿಯನ್ನು ಹಾಡುತಿರುವೆನು ನಾನು.

ನಾನೊಬ್ಬ ಕವಿಯಾಗಿ ಕೃತಿಯನ್ನು ರಚಿಸುತ್ತ
ಸುಸ್ವರದಿ ಹಾಡುವೆನು ಹರಸೆನ್ನ ತಾಯೆ.

ಸುಂದರ ಹಾಡನ್ನು ರಚಿಸಿ ನಾ ಹಾಡುವೆನು
ಮೌನವಾಗಿಯೆ ಕುಳಿತು ಕೇಳಿರಿ ದಯವಿಟ್ಟು.

ವೀಣೆ ನಾದದ ಜೊತೆಗೆ ಹಾಡುವೆನು ನಾನಿನ್ನು ,
ಆಲಿಸಿ ಕೇಳಿರಿ ಬಂಧು ಭಾಂದವರೆ.

No comments:

Post a Comment