Monday, 23 February 2015

ಸಂಸಾರ ಸಾಗರ





ಧ್ಯಾನವ ಮಾಡಿರಯ್ಯ ಮನುಜರೆಲ್ಲ
ಧ್ಯಾನವ ಮಾಡೀರಯ್ಯ ಧ್ಯಾನವ ಮಾಡಿ
ಅಜ್ನಾನವ ಕಳೆದು ಸುಜ್ನಾನವ ಪಡೆಯಿರಯ್ಯ॥ಪ॥

ಹಲವಾರು ಜನ್ಮವ ಕಳೆದು ಬಂದು
ಮಂಗನಿಂದ ಮಾನವ ಜನ್ಮವ ಪಡೆದು
ಜನ್ಮದೊಳಗೆ ಅತಿ ದೊಡ್ಡ ಜನ್ಮವಿದು
ಹಾನಿ ಮಾಡಿಕೊಳ್ಳ ಬೇಡಿರಯ್ಯ.

ಮೂರುದಿನದ ದಿನದ ಸಂಸಾರದ ಯಾತ್ರೆಗೆ
ಬಂದು ಇಲ್ಲಿ ಎಲ್ಲ ನೆಲೆಸಿಹರಯ್ಯ.
ನಾನು ತಾನೆಂಬಹಂಕಾರದಿಂದ
ಉರಿದು ಮೆರೆಯ ಬೇಡೀರಯ್ಯ.

ಸಂಸಾರವೆಂಬೋ ಸಾಗರದೊಳಗೆ
ನೌಕೆಇಲ್ಲದೆ ಕಡಲನು ದಾಟಿ ದಡವ ಸೇರಿರಯ್ಯ
ಎಲ್ಲರೂ ದಡವ ಸೇರಿರಯ್ಯ.

ಹಣವನು ಗಳಿಸದೆ ಗುಣವನು ಗಳಿಸಿ
ಎಲ್ಲರೂ ಒಳ್ಳೇ ಹೆಸರನು ಉಳಿಸಿ ಬದುಕಿ
ಬಾಳಿರಯ್ಯ ಎಲ್ಲರೂ ಬದುಕಿ ಬಾಳಿರಯ್ಯ.

                                       -ನಳಿನಾಕ್ಷಿ ಹೀನಗಾರ್

ಈ ಹಾಡನ್ನು YouTube ನಲ್ಲಿ ಕೇಳೀ ನಿಮ್ಮ ಅಭಿಪ್ರಾಯ ತಿಳಿಸಿ

ಈ ಹಾಡೀನ ವೀಡಿಯೊ

No comments:

Post a Comment