Saturday, 21 February 2015

ಬಾ ಗೆಳತಿ


ಕೈ ಬೀಸಿ ಕರೆಯುತಿದೆ
ಹೂ ಬನದ ಕಡೆಗೆ
ಹೋಗೊಣ ಬಾ ಗೆಳತಿ
ನಾವೀಗ ಜೊತೆಗೆ.

ಅಲ್ಲಿ ಹೋಗಿ ನಾವು
ಏನು ಮಾಡಬೇಕು
ಹೇಳೊ ನೀ ಗೆಳೆಯ
ನಾ ಬರುವೆ ಜೊತೆಗೆ.

ನಾವಿಬ್ಬರು ಕೂಡಿ
ನಗುತ ಮಾತಡುತ
ಹೋಗೊಣ ಬಾರೆ
ಹೂ ಬನದ ಕಡೆಗೆ.

ಎಲ್ಲಿಹುದು ಹೂ ಬನ
ಹೇಳೊ ನೀ ಗೆಳೆಯ
ನಡೆ ನೀ ಮುಂದೆ
ನಾ ಬರುವೆ ಜೊತೆಗೆ.

ಅಲ್ಲಿಹುದು ಹೂ ಬನ
ನೋಡೆ ನೀ ಗೆಳತಿ
ಎಷ್ಟು ಸುಂದರವಾಗಿ
ಕಾಣುವುದು ನೋಡೆ.

ಬಣ್ಣ ಬಣ್ಣದ ಹೂ
ಅರಳಿಹವು ನೋಡೆ
ಬನದೊಳಗಿನ ಸಿರಿಯ
ಸೊಬಗನು ನೋಡೆ.

ಹೂವಿಂದುವಿಗೆ ದುಂಬಿ
ಹಾರುವುದ ನೋಡೆ
ಹೂವಿನ ಮಕರಂದ
ಹೀರುವ ಚಂದವ ನೀ ನೋಡೆ.
                         -ನಳಿನಾಕ್ಷಿ

No comments:

Post a Comment