Thursday, 26 February 2015

ಶೃಂಗೇರಿ ಶ್ರೀ ಶಾರದಾಂಬಾ


ಧಾಟಿ-ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ...ಶೃಂಗೇರಿ ಶ್ರೀ ಶಾರದಾಂಬಾ
ನಾನಿನ್ನ ಕರೆವೆ ಮೂಕಾಂಬಾ
ನೀ ನಮ್ಮ ಮನೆಗಿಂದು ಬಂದು
ನಮ್ಮ ಬಾಳನ್ನು ಬೆಳಗೀಸೆ ಅಂಬಾ॥ಪ

ನೀನಿನ್ನು ನಮ್ಮ ಗ್ರಹದಲ್ಲಿ ನೆಲೆಸಿ
ಭಕ್ತರ ಕಷ್ಟವ ಹರಿಸೆ, ನಿನ್ನಂತ ನಡೇಯ
ನಿನ್ನಂತ ನುಡಿಯ ನೀ ನೀಡು ನಮಗಿನ್ನು ತಾಯೆ
ಶಾರದೆ ವಾರಿದೆ ದಯೆತೋರೆ ಕರುಣನಿಧೆ॥೧

ಮಂಗಳದಾತೆ ಹೇ ಜಗನ್ಮಾತೆ ಪೋಜಿಪೆ ನಿನ್ನ
ವಿಖ್ಯಾತೆ,ನಿನ್ನೋಳು ನಾವು ಬೇಡುವೆ ವೀಗಾ
ಮಾಂಗಲ್ಯ ಭಾಗ್ಯವ ತಾಯೆ, ನೀ ನೀಡುತ
ಶುಭ ಕೋರುತ ಸೌಭಾಗ್ಯ ನೀ ನೀಡೆ ತಾಯೆ॥೨

ಹಗಲಲ್ಲೂ ನಿನ್ನ ಇರಳಲ್ಲೂ ನಿನ್ನ ನಾನಿನ್ನ
ನಾಮವ ಸ್ಮರಿಪೆ,ಚರಣಕ್ಕೆ ಮಣಿದು
ಕರವನ್ನು ಮುಗಿದು ನಿನ್ನೋಳು ಬೇಡುವೆನೀಗ
ಕಾಣದ ಕೇಳದ ಸೊಗಸಾದ ವರವನ್ನು ನೀಡೇ॥೩

                                         -ನಳಿನಾಕ್ಷಿ ಹೀನಗಾರ್
ಈ ಹಾಡನ್ನು YouTube ನಲ್ಲಿ ಕೇಳೀ ನಿಮ್ಮ ಅಭಿಪ್ರಾಯ ತಿಳಿಸಿ

ಈ ಹಾಡೀನ ವೀಡಿಯೊ

No comments:

Post a comment