Saturday 21 February 2015

ಇವಳೆ ನನ್ನಾಕಿ

ಇವಳೆ ನನ್ನಾಕಿ ನೋಡಿ ಇವಳೆ ನನ್ನಾಕಿ
ಹಳ್ಳಿ ಗುಗ್ಗರು ಬೇಡ ಎಂದು
ಸುರಸುಂದರಿಯೇ ಬೇಕೆಂದು
ಕಟ್ಟಿಕೊಂಡು ಹಳ್ಳಿ ಊರಿಗೆ ಕರೆತಂದಾಕಿ॥ಇವಳೆ ನನ್ನಾಕಿ॥

ಹತ್ತಾರು ಜನ ತನ್ನ ನೋಡಲೆಂದು
ಒಳ್ಳೆ ಫ್ಯಾಷನ್ ಮಾಡಿಕೊಂಡು
ಸಿಟಿಗೆ ಹೋಗಿ ಬೀದಿ ತುಂಬ
ಅಲ್ಲಿಂದಿಲ್ಲಿಗೆ ಓಡಾಡುವಳಿಕಿ॥ಇವಳೆ ನನ್ನಾಕಿ॥

ಪ್ಯಾಂಟು ಶರ್ಟು ಹಾಕಿಕೊಂಡು
ಹೇರ್ ಕಟ್ಟಿಂಗ್ ಮಾಡಿಕೊಂಡು
ಕೂಲಿಂಗ್ ಗ್ಲಾಸ್ ಕೈಯೊಳು ಹಿಡಿದು
ಅಲ್ಲಿಂದಿಲ್ಲಿಗೆ ಓಡಾಡುವಳೀಕಿ ॥ಇವಳೆ ನನ್ನಾಕಿ॥

ಹ್ಯಾಟು ಬೂಟು ಹಾಕಿಕೋಂಡು
ಪ್ಯಾಶನ್ ಬ್ಯಾಗ ಹಿಡಿದುಕೊಂಡು
ಸಿಟಿಬೀದಿಯಲಿ ಸ್ಕೂಟರ್ ಹತ್ತಿಕೊಂಡು
ಅಲ್ಲಿಂದಿಲ್ಲಿಗೆ ತಿರುಗಾಡುವಳೀಕಿ॥ಇವಳೆ ನನ್ನಾಕಿ॥

ಮನೆಯಲಿ ಅಡುಗೆ ಮಾಡೆಂದರೆ ಒಲ್ಲೆಂಬಳಾಕಿ
ಹೋಟೆಲಿಗೋಗಿ ಊಟವ ಮಾಡಿ
ಮನೆಗೆ ಬಂದು ಮಲಗುವಳೀಕಿ ॥ಇವಳೆ ನನ್ನಾಕಿ॥
                                -ನಳಿನಾಕ್ಷಿ

No comments:

Post a Comment