Sunday 22 February 2015

ಏಳೀ ಎದ್ದೇಳಿ


ಏಳೀ ಎದ್ದೇಳಿ ಏಳಿರೇಳಿರಿ
ಮುದ್ದು ಮಕ್ಕಳೆ ರಾಷ್ಟಗೀತೆಯ ಹಾಡೋಣ
ದೇಶ ಸೇವೆಯ ಮಾಡೋಣ.

ಎಲ್ಲರು ಒಂದೇ ತಂದೆ ತಾಯಿಯ
ಮಕ್ಕಳು ಎಂದು ಕೂಗೋಣ
ಎಲ್ಲರು ಕೂಡಿ ದುಡಿಯೋಣ.

ದೇಶ ದಾರಿದ್ರ್ಯವ ತೊಲಗಿಸಿ
ಇನ್ನು ನಾವೆಲ್ಲರು ಚಂದದಿ ಬಾಳೊಣ
ಸುಂದರ ಬಾಳನು ಬೇಳಗೋಣ.

ಮಹಾತ್ಮ ಗಾಂಧಿಯ ತತ್ವವನೆಂದು
ಮರೆಯದೆ ನಾವು ನಡೆಸೋಣ
ಅಹಿಂಸೆ ಮಾರ್ಗದಿ ನಾವು ನಡೆಯೋಣ.
                          -ನಳಿನಾಕ್ಷಿ

No comments:

Post a Comment