Saturday 21 February 2015

ಮಲೆನಾಡ ಸೊಬಗು

ಪ್ರಕೃತಿಯ ಸೊಬಗಿನ ಸೌಂದರ್ಯದ ಸಿರಿ
ನೋಡಲು ಎಂಥ ಸುಂದರವು
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಲರವ
ಕೇಳಲು ನಮಗಾನಂದವದು.

ಗಿಡಮರ ಕಡಿಯದೆ ಬೆಳೆಸಿದರದರನು
ನೋಡಿದರೆಸ್ಟು ಚೆಂದವದು
ಬಗೆ ಬಗೆ ಬಣ್ಣದ ಎಲೆ ಹೂ ಹಣ್ಣನು
ಕಾಣಲು ಇನ್ನೂ ಖುಷಿಕರವು.

ಜಾತಿ ವಿಜಾತಿಯ ಮರಗಳು ಬೆಳೆದು
ಘೋರಾರಣ್ಯ ವೆಂದೆನಿಸುವುದು
ನಾನಾ ತರದ ಪ್ರಾಣಿ ಪಕ್ಷಿಗಳು
ವಾಸಿಸುತಿರುವ ಮನೆಯು ಅದು.

ಮಲೆನಾಡಿನ ಈ ಸೃಷ್ಠಇ ಸೌಂದರ್ಯವ
ಏನೆಂದು ನಾ ವಣಿ೯ಸಲಿ
ರಸಿಕರಿಗೆ ರಸಮಯವಾಗಿಹ
ಸವಿ ಜೇನುಗೂಡಿನ ನಾಡು ಇದು.

ದಟ್ಟಡವಿಯೊಳು ಗಿಡಮರ ಕಡಿದು
ಕಾನನವನು ನಾಶ ಗೊಳಿಸಿಹರು
ಪರಿಸರ ಕೆಡಿಸಿ ಮಳೆ ಬೆಳೆ ಇಲ್ಲದೆ
ಗೋಳಾಡುವರು ಮಾನವರು.
          -ನಳಿನಾಕ್ಷಿ

No comments:

Post a Comment