Monday, 23 February 2015

ಹೃದಯ ಕಮಲ


ಮಧುರ ಗಾನ ಮೊಳಗಿರಲಿ
ಹೃದಯ ಕಮಲ ಅರಳಿರಲಿ
ಹೊಂಗನಸ ಕಾಣುತಿರಲಿ
ಜ್ನಾನ ಜ್ಯೋತಿ ಬೆಳಗಿರಲಿ.

ಬಿರುಗಾಳಿ ಬೀಸದಿರಲಿ
ತಂಗಾಳಿ ಸೂಸುತಿರಲಿ
ಗಿಡಮರಗಳು ಅಲ್ಲಾಡಲಿ
ಹೊಂಬೆಳಕು ಮೂಡಿ ಬರಲಿ.

ಮುಂಗೋಳಿ ಕೂಗುತಲೆ
ಮೂಡಣದಿ ಕೆಂಪೇರುತಿದೆ
ಮಬ್ಬು ಮುಸುಕಿದ ಮಂಜು
ಹರಿದು ಧರೆಗಿಳಿಯುತಿದೆ.
                 -ನಳಿನಾಕ್ಷಿ ಹೀನಗಾರ್

No comments:

Post a Comment