Thursday 5 March 2015

ಬಾರೆ ಶಾರದೆ ವೀಣೆ ಹಿಡಿದು



ಬಾರೆ ಶಾರದೆ ವೀಣೆ ಹಿಡಿದು ನೀ
ವೀಣೆ ನಾದವ ನುಡಿಸುತ
ಪ್ರೇಮದಿಂದಲಿ ನಿನ್ನ ಕರೆವೆನು
ವೀಣೆ ನಾದವ ಕೇಳಲು।।

ಜರಿಯ ಪೀತಾಂಬರವ ಉಟ್ಟು
ಕಡಗ ಕಂಕಣ ಬಳೆಯನಿಟ್ಟು
ಹೆಜ್ಜೆ ಹಜ್ಜೆಗು ಗೆಜ್ಜೆ ನಾದದ
ಗತ್ತನಿಡುತ  ನೀ ಬಾರೆಲೆ

ತುಂಗ ತೀರದ ಶೃಂಗೇರಿಯಲಿ
ನೆಲೆಸಿರುವೆಯೆ ಮಾತೆಯೆ
ಬ್ರಂಗಕುಂತಳೆ ಕೋಮಲಾಂಗಿಯೆ
ನಿನ್ನ ಕರೆವೆ ನಾನೀಗಲೆ

ವರುಷ ವರುಷವು ನವರಾತ್ರಿಯಲಿ
ಹರುಷ ದಿಂದಲಿ ಭಕ್ತರು
ನಿನ್ನ ಕರೆದು ಪೂಜೆಮಾಡಿ
ಆಶಿರ್ವಾದವ ಬೇಡ್ವರು

ನಾನು ನಿನ್ನ ಚರಣಕೆರಗಿ
ಬೇರೆ ಏನನು ಬೇಡೆನು
ವೀಣೆ ನಾದದ ಜೊತೆಗೆ ಹಾಡುವ
ಭಾಗ್ಯವನು ನೀಡೆನಗೆ ನೀ

-ನಳಿನಾಕ್ಷಿ ಹೀನಗಾರ್

No comments:

Post a Comment