Sunday 22 February 2015

ನನ್ನ ಬಯಕೆ


ನನ್ನೀ ಮನದೊಳು ಕೃತಿ ತುಂಬಿರುವಾಗ
ಇನ್ನೇನನು ನಾ ಬಯಸಿರಲಿ.
ನಮ್ಮೀ ಬಾಳನು ಬೆಳಗಿರುವಾಗ
ನಾನಿನ್ನೇತಕೆ ಬೇಸರಗೊಳಲಿ.

ಪಟ್ಟೆ ಪೀತಾಂಬರ ಬಂಗಾರದೊಡವೆ
ಗಳೇತಕೆನಗೆ ಬೇಕಿನ್ನು, ನುಡಿಮುತ್ತಿನ
ಮಣಿಸರಮಾಲೆಗಳು ಎನ್ನೀ ಮನದೊಳು
ತುಂಬಿರುವಾಗ ಇನ್ನೇನನು ನಾ ಬಯಸಿರಲಿ.

ಕೃತಿಯನು ರಚಿಸುತ ಸ್ತುತಿಯೊಳು ಕೃಪೆ ಬೇಡುತ
ಹಾಡುತಿರುವೆ ನಾ ಮನದೊಳಗೆ
ಇದರೊಳಗಿರುವ ಸಂತೋಷಗಳಿನ್ಯಾವುದರೊಳಗಿರುವುದು
ಎನಗೆ ಇನ್ನೆನನು ನಾ ಬಯಸಿರಲಿ.

ಮಳೆಯೇ ಬರಲಿ ಕಡಲೇ ಉಕ್ಕಲಿ
ಕೊಚ್ಚಿಕೊಂಡೊಗದೀ ಕೃತಿಗಳನು
ಕನಸು ಮನಸಿನೊಳು ಎಣಿಸದೀ ಭಾಗ್ಯವು
ಬಂದೊದಗಿಹುದೆನಗೆ ಇನ್ನೆನನು ನಾ ಬಯಸಿರಲಿ.
                          -ನಳಿನಾಕ್ಷಿ

No comments:

Post a Comment